ಅವ್ನು ನನ್ಹತ್ರ ಮಾತ್ನಾಡಲ್ಲ ಅಂತ
ನಂಗೇನು ತುಂಬ ಬೇಜಾರಾಗ್ತಾ ಇಲ್ಲ.
ವಿಪರೀತ ನೋವು ಆಗ್ತಾ ಇಲ್ಲ.
ಆದ್ರೆ..
ತುಂಬ ದಿವ್ಸಗಳ ಸಂಗ ನೋಡು,
ಕಳಚಿ ಕೊಳ್ಳಿಕ್ಕೆ ತಯಾರೇ ಇಲ್ಲ.
ಮತ್ತೇನಾದ್ರೂ ನೆನಪಾಗ್ತದೆ
ಮತ್ತೆ ಮಾತ್ನಾದ್ವಾ ಅನ್ಸ್ತದೆ.
ಓಡಿ ಹೋಗಿ ನಿಲ್ಸಿ ನಗುವ ಅನ್ಸ್ತದೆ.
ಬೈಸಿಕೊಳ್ಳುವ ಅನ್ಸ್ತದೆ.
ಸುಳ್ಳು ಸುಳ್ಳೇ ಜಗಳಾಡ್ವ,
ಸಿಟ್ಟು ಮಾಡಿಕೊಳ್ವ,
ಓರೆಯಲ್ಲಿ ಕದ್ದು ನೋಡ್ವ,
ಸಿಕ್ಕಿ ಹಾಕಿಕೊಂಡು ಕಣ್ಮುಚ್ಚಿ ನಗುವ,
ಪೆದ್ದು ಪೆದ್ದು ಥರ ಆಡ್ವ,
ಹರಟೆ ಹೊಡಿವಾ
ಮತ್ತೊಮ್ಮೆ ಕೇಳಿಯೇ ಬಿಡುವ
ಯಾಕ್ಮಾತಾಡ್ಲಿಲ್ಲ ಇಷ್ತ್ದಿದಿನ?- ಅಂತ
ತುಂಬಾ ಅನ್ಸ್ತದೆ.
ಗೀಳು ಹತ್ತಿ ಬಿಟ್ಟಿದೆ
ಜೊತೆಗಿರುವುದು.
ಮನಸ್ಸು ಕೇಳುದೇ ಇಲ್ಲ.
ಕನಸು ಕಾಣ್ಲಿಕ್ಕೆ ಶುರು ಮಾಡ್ತದೆ.
ಸುಮ್ಮನೆ.
ಚೂರು ಚೂರೇ ಆದ್ರೂ
ಭಾರ ಹೊರುವವಳು ನಾನೇ ಅಲ್ವಾ?
27/12/2013
No comments:
Post a Comment