ಧಗೆಯಾರದ ಎದೆ ನನ್ನದು
ಉರಿವ ನೆನಪುಗಳಾಗರ
ನಗೆ ತೀದಿಹೆ ಹೊಗೆ ತೋರದೆ
ಸೋಲಲಷ್ಟೇನು ಆತುರ?
ದಿನ ಕಳೆದಿದೆ ಹತ್ತಾಗಿದೆ
ಸುಳಿವಿರದೇ ಸಾಗಿದೆ
ನೆನಪಿದೆಯೋ ಮರೆತಿರುವೆಯೋ
ಎದೆ ಸಣ್ಣಗೆ ನಡುಗಿದೆ
ಕುಂಡದ ಗಿಡ ಹೂ ಬಿಟ್ಟಿದೆ
ಚಂದ ಚಂದ ವಾಗಿದೆ
ಬಳಿಯೇನೋ ಹೇಳಬೇಕಿತ್ತು
ಅದೇನೋ ಅಡ್ಡಿಯಾಗಿದೆ.
ಒಂದಿನಿತೂ ಬದಲಾಗದ್ದು
ಮರೆಯಿಂದಲೇ ಕಂಡಾಗಿದೆ.
ನೋವೇ ಇರದ ಆ ಸಂಭ್ರಮ
ಒಳಗೆಲ್ಲೋ ಚುಚ್ಚುತ್ತಿದೆ.
ಒಂಟಿತನದ ಭಾವವೊಂದು
ಇಂಚಿಂಚೇ ಹೆಚ್ಚುತ್ತಿದೆ.
ಗಂಟುಮುಖದ ಗಂಟಲಾಳ
ಹಿಂಸೆಯು ಮನೆಮಾಡಿದೆ.
ಓಡಿಹೋಗಿ ನಕ್ಕುಬಿಡಲು
ಬೆಟ್ಟದಷ್ಟು ಆಸೆಯಿದೆ.
ಮನ ಮಾಡಿದ ಮೊಂಡು ಹಠದ
ಮನ ಮಾಡಿದ ಮೊಂಡು ಹಠದ
ತುಂಡು -ಇಷ್ಟೇ ಉಳಿದಿದೆ
9/9/2013
No comments:
Post a Comment