ಅದೊಂದು
ಅಪೂರ್ಣ ಕವಿತೆ
ಕೊನೆಗೊಂಡೂ ಕೊನೆಯಾಗದ್ದು
ತಿಳಿಗೊಂಡೂ ಮರೆಯಾಗದ್ದು
ಬಿಟ್ಟೆಯಷ್ಟಿದ್ದೂ ಬೆಟ್ಟವಾದದ್ದು
ಚಿಟ್ಟೆಯಾಗಿಸಿದ್ದು
ಬಣ್ಣ ತುಂಬಿಸಿದ್ದು
ನಗು ಮಿಂಚಿಸಿದ್ದು
ಮುದುಡಿಸಿದ್ದು
ಹಂಗಿಸಿದ್ದು
ಸುಮ್ಮನೆ ಅಳು ಬರಿಸಿದ್ದು
ಇಲ್ಲ, ಇಲ್ಲ ಎಂದಷ್ಟೂ
ಇದೆ ಅನ್ನಿಸಿದ್ದು
ಅದೆಲ್ಲಿಯೋ ಶುರುವಾದದ್ದು
ಅದೆತ್ತಲೋ ಸಾಗಿದ್ದು
ಅರ್ಥವಿಲ್ಲದ್ದು
ಅರ್ಥವೇ ಆಗದ್ದು
ಮಾತ ಮೀರಿದ್ದೂ
ಮೌನ ಸಹಿಸದ್ದು
ಹೆಸರಿಲ್ಲದ್ದು...
ನಿನ್ನ ನೆನಪು;
ಅದೊಂದು
ಅಪೂರ್ಣ ಕವಿತೆ....
16/12/2012
No comments:
Post a Comment