ಹರಿಯ ಬೇಕು
ಹಂಚ ಬೇಕು
ಚೀರಿ-ನನ್ನೊಳಗಿದ್ದ
ನಾನೇ ಸೃಷ್ಟಿಸಿದ ಚಿಪ್ಪ;
ರಂಧ್ರವೂ ಇಲ್ಲದ್ದಲ್ಲಿ
ಬಂಧಿಯಾಗುವ ಮೊದಲು;
ಉಸಿರು ಕಟ್ಟುವ ಮೊದಲು
ತಲೆ ಸಿಡಿಯುವ ಮೊದಲೇ
ಹರಿಯ ಬೇಕು ಅದು
ಹರಿಯ ಬೇಕು
ನಿಂತ ನೀರಾಗದೆ
ಕೊಳೆಯದೇ ನಾರದೆ
ಧುಮ್ಮಿಕ್ಕಿ, ತಳಮುಟ್ಟಿ
ಮೇಲೆದ್ದು ನಿಲ್ಲದೇ
ಸೆಳವಿನಾಚೆ, ಎಳವಿನಾಚೆ
ಭೋರ್ಗರೆವ ಸಮುದ್ರದಾಚೆ
ಮತ್ತೂ ನಿಲ್ಲದೆ,
ದಿಗಂತದತ್ತ..
ಹರಿಯ ಬೇಕು..
ಹರಿಯ ಬೇಕು..
3/5/2013
3/5/2013
No comments:
Post a Comment