ಅವನಿಗವಳು ಬೇಕಿರಲಿಲ್ಲ
ಅವಳೂ ಇಲ್ಲ ಎಂದಳು.
ಮೇಲಿನ ಕಿಟಕಿಯಲ್ಲಿ ಕೂತು
ಸೂಫೀ ಹಾಡು ಹಾಡಿದಳು
ಮೋಡ ಮಾಗಿತ್ತು
ರಾತ್ರಿ ಮಳೆ ಸುರಿಯಿತು
ಮೂಕಿಯಾಗಿದ್ದಳು
ಸುಂದರಕಣ್ಣು,
ಕಿವಿಯೋಲೆ,
ಸೆರಗು ಸರಿದಿತ್ತು
ಹಣೆ ಕಂಡಿತ್ತು
ಕಿಂಡಿ ಸಂದಿನ ಗೂಡು
ಸ್ವಚ್ಛಗೊಂಡಿತ್ತು.
9/2/2013
No comments:
Post a Comment